ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆಯು 1885ರಲ್ಲಿ ಬಿ. ಎಲ್. ರೈಸ್‍ರವರನ್ನು ನಿರ್ದೇಶಕರನ್ನಾಗಿ ಅಂದಿನ ಮೈಸೂರು ಸಂಸ್ಥಾನದ ಸರ್ಕಾರ ನೇಮಕ ಮಾಡುವುದರೊಂದಿಗೆ ಪ್ರಾರಂಭಗೊಂಡಿತು. ಈ ಇಲಾಖೆಯು ಭಾರತದ ಯಾವುದೇ ರಾಜ್ಯದ ಪ್ರಾಚ್ಯವಸ್ತು ಇಲಾಖೆಗಿಂತ ಅತ್ಯಂತ ಹಳೆಯದಾಗಿದೆ. ರೈಸ್‍ರವರು ಪ್ರಮುಖವಾಗಿ ಶಾಸನಗಳ ಸರ್ವೇಕ್ಷಣೆಯ ಕಾರ್ಯದಲ್ಲಿ ಇಲಾಖೆಯನ್ನು ತೊಡಗಿಸಿ ಅಂದಿನ ಮೈಸೂರು ಸಂಸ್ಥಾನದ 8 ಜಿಲ್ಲೆಗಳು ಮತ್ತು ಕೊಡಗು ಜಿಲ್ಲೆಯಲ್ಲಿ ದೊರೆತ ಒಟ್ಟು…